Luma.Green ಹೇಗೆ ಕೆಲಸ ಮಾಡುತ್ತದೆ
ವಸ್ತುಗಳು ಮನೆಗಳಿಂದ ಸಂಗ್ರಹ ಅಂಗಡಿಗಳು, ಪೂರ್ವ ಸಂಸ್ಕರಣಾ ಸಂಸ್ಥೆಗಳು ಮತ್ತು ಮರುಬಳಕೆದಾರರನ್ನು ತಲುಪಿ ಹೊಸ ವಸ್ತುಗಳಾಗುತ್ತವೆ. ಪ್ರತಿ ಹಸ್ತಾಂತರವನ್ನು Luma.Green ದಾಖಲಿಸುತ್ತದೆ.
ಹಂತ 1
ಮಾರಾಟ

ಮನೆಯವರು ತಮ್ಮ ಬಳಿ ಇರುವ ಗುಜರಿಯನ್ನು ಆಯ್ಕೆ ಮಾಡಿ, ಹತ್ತಿರದ ಪ್ರತಿ ಅಂಗಡಿ ಎಷ್ಟು ಕೊಡುತ್ತದೆ ಎಂದು ನೋಡುತ್ತಾರೆ. ನಂತರ ಪಿಕಪ್ ಬುಕ್ ಮಾಡುತ್ತಾರೆ, ಅಥವಾ ತಾವೇ ಅಂಗಡಿಗೆ ತಂದುಕೊಡಲು ಬುಕ್ ಮಾಡುತ್ತಾರೆ. ಗುಜರಿ ಅಂಗಡಿಯವರು ಪ್ರತಿ ಸಾಮಗ್ರಿಯನ್ನು ತೂಕ ಮಾಡಿ, ನಗದು ಅಥವಾ UPI ಮೂಲಕ ಹಣ ಕೊಡುತ್ತಾರೆ. ಇಬ್ಬರಿಗೂ ರಸೀದಿ ಸಿಗುತ್ತದೆ.
ಮಾರಾಟ
- ಪ್ರತಿ ಅಂಗಡಿ ತನ್ನ ಬೆಲೆಯನ್ನು ತಾನೇ ನಿಗದಿ ಮಾಡುತ್ತದೆ, ಆದರೆ ಪ್ರಕಟಿಸಿದ ಕನಿಷ್ಠ ಬೆಲೆಗಿಂತ ಎಂದಿಗೂ ಕಡಿಮೆ ಅಲ್ಲ
- ಅಂಗಡಿಯ ತಕ್ಕಡಿಯಲ್ಲಿ ತೂಕ ಮಾಡಿ, ಗ್ರಾಂವರೆಗೆ ದಾಖಲಿಸಲಾಗುತ್ತದೆ
- ಟ್ರ್ಯಾಕಿಂಗ್ ಲಿಂಕ್ ಸಿಗುತ್ತದೆ, ಅಕೌಂಟ್ ಬೇಕಿಲ್ಲ
ಹಂತ 2
ವ್ಯಾಪಾರ

ವ್ಯವಹಾರ ಪಾವತಿಗಳು ಪಾವತಿ ಗೇಟ್‌ವೇ ಬಳಸುತ್ತವೆ. ಪ್ರಸ್ತುತ ಪಾವತಿ ಸ್ಥಿತಿಗಾಗಿ ಆರ್ಡರ್ ನೋಡಿ.
ವ್ಯಾಪಾರ
- ಪರಿಶೀಲಿಸಿದ ವ್ಯಾಪಾರಿಗಳು ಮಾತ್ರ ವ್ಯಾಪಾರ ಮಾಡಬಹುದು
- ಲೋಡ್ ಕಳುಹಿಸಿದಾಗ ಮತ್ತು ಸ್ವೀಕರಿಸಿದಾಗ ದಾಸ್ತಾನು ಬದಲಾಗುತ್ತದೆ
- ಹಣ ಪಾವತಿಯಾದ ಪ್ರತಿ ವ್ಯಾಪಾರಕ್ಕೂ ನಂಬರ್ ಇರುವ ವ್ಯಾಪಾರ ರಸೀದಿ
ಹಂತ 3
ದಾಖಲೆ

ಪ್ರತಿ ಕೈಬದಲಾವಣೆಯನ್ನೂ ಬರೆದಿಡಲಾಗುತ್ತದೆ: ಯಾರು, ಏನು, ಎಷ್ಟು, ಯಾವಾಗ ಮತ್ತು ಎಲ್ಲಿ. ಬೆಲೆ ಪಟ್ಟಿ, ದಾಸ್ತಾನು, ನಿಯಮ ಪಾಲನೆ ಮತ್ತು ಕೊಡುಗೆಯ ಅಂಕಿಗಳು ಈ ದಾಖಲೆಯಿಂದಲೇ ಬರುತ್ತವೆ. EPR ಮತ್ತು ಮರುಬಳಕೆ ಮಾನದಂಡಗಳು ಕೇಳುವ ಸಾಕ್ಷ್ಯವೂ ಇದೇ.
ದಾಖಲೆ
- ಮನೆ ಬಾಗಿಲಿನಿಂದ ಕಾರ್ಖಾನೆಯವರೆಗೆ ಒಂದೇ ದಾಖಲೆ
- ಮರುಬಳಕೆದಾರರು ಮತ್ತು ಕಾರ್ಖಾನೆಗಳಿಗೆ ಆರ್ಥಿಕ ವರ್ಷವಾರು EPR ಒಟ್ಟು ಲೆಕ್ಕ
- ಕ್ರೆಡಿಟ್‌ಗಳಿಗೆ ಬೇಕಾದ ಸಾಕ್ಷ್ಯ, ಯಾವುದನ್ನೂ ಎರಡು ಬಾರಿ ಎಣಿಸದೆ

ನಿಮ್ಮ ಸಾಮಗ್ರಿ ಸಿದ್ಧ ಮಾಡಿ
ವಿಂಗಡಿಸಿದ, ಒಣಗಿದ ಸಾಮಗ್ರಿ ಬೇಗ ತೂಕ ಆಗುತ್ತದೆ ಮತ್ತು ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ.
- ಕಾಗದವನ್ನು ಒಣಗಿದಂತೆ, ಚಪ್ಪಟೆಯಾಗಿ ಇಡಿ
- ದಿನಪತ್ರಿಕೆಗಳನ್ನು ಒಂದರ ಮೇಲೊಂದು ಜೋಡಿಸಿ, ರಟ್ಟು ಡಬ್ಬಗಳನ್ನು ಚಪ್ಪಟೆ ಮಾಡಿ. ಒದ್ದೆ ಕಾಗದಕ್ಕೆ ಬೆಲೆ ಕಡಿಮೆ.
- ಬಾಟಲಿಗಳನ್ನು ಖಾಲಿ ಮಾಡಿ, ಚಪ್ಪಟೆ ಮಾಡಿ
- ಒಳಗೆ ಏನಾದರೂ ಉಳಿದಿದ್ದರೆ ಚೆಲ್ಲಿ, ಜಾಗ ಉಳಿಸಲು ಪ್ಲಾಸ್ಟಿಕ್ ಬಾಟಲಿಗಳನ್ನು ಒತ್ತಿ ಚಪ್ಪಟೆ ಮಾಡಿ.
- ಲೋಹವನ್ನು ಬೇರೆ ಇಡಿ
- ಟಿನ್ ಡಬ್ಬಿಗಳು, ಸ್ಟೀಲ್ ಮತ್ತು ಅಲ್ಯೂಮಿನಿಯಂ ಅನ್ನು ಬೇರೆ ಚೀಲದಲ್ಲಿ ಹಾಕಿ.
- ಎಲೆಕ್ಟ್ರಾನಿಕ್ ವಸ್ತು ಮತ್ತು ಬ್ಯಾಟರಿ ಬೇರೆ ಇಡಿ
- ಹಳೆಯ ಫೋನ್, ಚಾರ್ಜರ್ ಮತ್ತು ಬ್ಯಾಟರಿಗಳನ್ನು ಬಿಸಿಯಿಂದ ದೂರ, ಬೇರೆ ಡಬ್ಬದಲ್ಲಿ ಇಡಿ.